Tuesday, April 22, 2008

ಅಜ್ಜನ ತಿಥಿ

ಅಂದು ನಾನು ಹೆನ್ನಳಕ್ಕೆ ಅಜ್ಜನವರ ಶ್ರಾಧ್ದಕ್ಕೆ ಹೋಗಲೇಬೇಕೆಂದು ತೀರ್ಮಾನಿಸಿದ್ದೆ.
ಅದು ಸುಡು ಬಿಸಿಲಿನ ಏಪ್ರಿಲ್ ೪, ಶುಕ್ರವಾರ ೨೦೦೮.
ಹೆನ್ನಳದ ಹೆಚ್ಚಿನ ಸಹೋದರರೆಲ್ಲರೂ ಈ ಭಾರಿಯ ಶ್ರಾಧ್ದದಲ್ಲಿ ಭಾಗವಹಿಸಬೇಕೆಂದು ತೀರ್ಮಾನಿಸಿದ್ದೆವು.
ಉಳಿದವರೆಲ್ಲರೂ ಬಸ್ಸಿನಲ್ಲಿ ಹೊಗುವುದೆಂದು ಹೇಳಿದ್ದರು.

ನಾನು ಮಾತ್ರ ಇತ್ತೀಚೆಗೆ ಪ್ರಾರಂಭವಾದ ರೈಲಿನಲ್ಲಿ ಪುತ್ತೂರಿಗೆ ಹೋಗಿ ಹೆನ್ನಳಕ್ಕೆ ಹೋಗಬೇಕೆಂದು ತೀರ್ಮಾನಿಸಿದ್ದೆ.
ಹಾಗೆ ಆ ದಿನ ಸಾಯಂಕಾಲ ೭ ಘಂಟೆಗೆ ಆಫೀಸ್ ಬಿಟ್ಟೆ.

ಯಾವತೂ ಇಲ್ಲದ ಟ್ರಾಫಿಕ್ಕು ಆ ದಿನ ಇತ್ತೇನೋ ಅನ್ನಿಸಿತು!
ಅಂತೂ ಶಿವನ ರೂಮಿಗೆ ತಲುಪಿದಾಗ ರಾತ್ರಿ ೮ ಘಂಟೆ!!
ನನ್ನ CT-100 ನ್ನು ಅಲ್ಲಿ ಪಾರ್ಕ್ ಮಾಡಿ, ಬೇಗನೆ ಯಶವಂತಪುರದ ರೈಲ್ವೇ ಸ್ಟೇಶನ್ ಗೆ ಹೋದೆ.
೮.೩೫ಕ್ಕೆ Departure time!

ನಾನು ಟಿಕೆಟ್ ಕೌಂಟರ್ ತಲುಪಿದಾಗ ನನ್ನ ಟ್ರೈನಿನ ಬಗ್ಗೆ ಮೈಕ್ ನಲ್ಲಿ ಅನೌನ್ಸ್ ಮಾಡುತ್ತಿದ್ದರು,
ಕಬಕ-ಪುತ್ತೂರು ರೂ.೧೦೩ ಕೊಟ್ಟು ಟಿಕೆಟ್ ಪಡೆದೆ.

ಸದ್ಯ ಬೋಗಿ ಖಾಲಿ ಹೊಡೀತಿತ್ತು. ಬೇಗನೆ ಹತ್ತಿ ಕೂತೆ.

ಬೆಳಿಗ್ಗೆ ೫.೫೫ಕ್ಕೆ ಎಚ್ಚರವಾಯ್ತು.ಕಣ್ಣು ಬಿಟ್ಟಾಗ ಕಂಡ ದ್ರಶ್ಯ ಕಂಡು ಒಂದು ಕ್ಷಣ ದಂಗಾಗಿ ಹೋದೆ!!
ತುಂಬ ಸುಂದರವಾದ ಶಿರಾಡಿ ಬೆಟ್ಟದ ಮದ್ಯೆ ನಮ್ಮ ರೈಲು ಹೋಗುತ್ತಿತ್ತು,
ಹಿಂದೆ-ಮುಂದೆ ಸುರಂಗ, ಮದ್ಯೆ ಸೇತುವೆ!ಕೆಳಗೆ ಪ್ರಪಾತ!! ಎದುರು ಬೆಟ್ಟಗಳ ಮದ್ಯೆ ತೇಲಾಡುವ ಬೆಳ್ಳಿ ಮೋಡಗಳು!
(ಹಿಂದೆ ಮಾತ್ರ...ಕೆಟ್ಟ ವಾಸನೆಯ ಪಾಯಿಖಾನೆ)

ಅಂತೂ ೭ಘಂಟೆಗೆ ಸುಬ್ರಹ್ಮಣ್ಯ ಕ್ಕೆ ತಲುಪಿತು.
ಅಲ್ಲಿ, ಬೆಳಗ್ಗಿನ ತಿಂಡಿ - ಬಿಸಿ ಬಿಸಿ ಬನ್ಸ್!!
೮.೩೦ಗೆ ಪುತ್ತೂರು!